Tuesday, 27 December 2011

ಮನುಷ್ಯನ ಆಯುಷ್ಯಿನ ಕಥೆ

ಮನುಷ್ಯನ ಆಯುಷ್ಯನ್ನು ಹೀಗೇ ವಿಂಗಡಿಸಬಹುದು
1ನೇ ವರ್ಷದಿಂದ 20 ವರ್ಷದವರೆವಿಗೂ ಮಾತ್ರವೇ ಮನುಷ್ಯನ ನಿಜವಾದ "ಆಯುಷ್ಯ"
ಅಲ್ಲಿಯವರೆವಿಗೂ ಮನುಷ್ಯನಾಗಿಯೇ ಇರುತ್ತಾನೆ.
21ನೇ ವರ್ಷದಿಂದ 40 ವರ್ಷದವರಿಗೂ "ಕತ್ತೆ ಆಯುಷ್ಯವನ್ನು ಪಡೆಯುತ್ತಾನೆ"
ಅಂದರೆ ಮದುವೆಯಾಗಿ, ಮಕ್ಕಳಿಗೆ ತಂದೆಯಾಗಿ, ಸಂಸಾರದ ಭಾರವನ್ನು ಹೊತ್ತುಕೊಂಡು
ಸಿಕ್ಕಿದ್ದೆಲ್ಲಾ, ಶೇಖರಿಸಿಕೊಂಡು ಹೊತ್ತುಕೊಂಡು ಮನೆಗೆ ಹೊರಡುತ್ತಾನೆ.
41ನೇ ವರ್ಷದಿಂದ 60 ವರ್ಷದವರಿಗೂ "ನಾಯಿಯ ಆಯುಷ್ಯವನ್ನು ಪಡೆಯುತ್ತಾನೆ"
ಒಂದಷ್ಟು ಸಣ್ಣ-ಪುಟ್ಟ ಆನಾರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಅಂದರೆ ಮಕ್ಕಳು ಪ್ರೌಢವಾಸ್ಥೆಗೆ ಕಾಲಿಟ್ಟಿರುತ್ತಾರೆ. ಜೀವನದಲ್ಲಿ ಒಂದಲ್ಲ ಒಂದು ಟೆನ್ಷನ್ ಇರುತ್ತದೆ.ಆಗ ಶುರುವಾಗುತ್ತದೆ ಎಲ್ಲರ ಮೇಲೂ ಕೂಗಾಟ ಚೀರಾಟ, ಸಣ್ಣ ಸಣ್ಣ ವಿಷಯಗಳಿಗೆಲ್ಲಾ ಕೋಪ, ಅರಚಾಟ, ಕಿತ್ತಾಟದ ಬದುಕು.
61ನೇ ವರ್ಷದಿಂದ 80 ವರ್ಷದವರಿಗೂ "ಹಸು ಆಯುಷ್ಯವನ್ನು ಪಡೆಯುತ್ತಾನೆ"
ಅಂದರೆ ಜೀವನದಲ್ಲಿ ಎಲ್ಲವನ್ನು ಮುಗಿಸುವ ಹಂತಕ್ಕೆ ಬಂದಿರುತ್ತಾನೆ. ಕೆಲಸದಲ್ಲಿದ್ದವರು ನಿವೃತ್ತಿ ಪಡೆದಿರುತ್ತಾರೆ.
ಕೆಲವೊಮ್ಮೆ ನಿಸ್ಸಾಹಯಕರಾಗಿಬಿಡುತ್ತಾರೆ
ಯಾರೂ ಏನೇ ಹೇಳಿದರೂ ತಲೆ ಯಾಡಿಸಿಕೊಂಡು ಮುಂದೆ ಹೋಗ್ತಾ ಇರ್ತಾರೆ. ಭಾವಜೀವಿಗಳಾಗಿ ಬಿಡುತ್ತಾರೆ

81ನೇ ವರ್ಷದಿಂದ 100 ವರ್ಷದವರಿಗೂ "ಗೂಬೆ ಆಯುಷ್ಯವನ್ನು ಪಡೆಯುತ್ತಾನೆ"
ಅಂದರೆ ವೃದ್ದಾಪ್ಯ ಜೀವನದ ಕೊನೆ ಹಂತ : ಯಾವಾಗಲೂ ನಿದ್ದೆಯ ಮಂಪರು, ಕೂತಲ್ಲೇ ಕೂರುವುದು. ಎಲ್ಲಂದರಲ್ಲೇ ನಿದ್ರೆಗೆ ಜಾರುವುದು. ಇದ್ದು ಇಲ್ಲದಂತಿರುವುದು

ಹೀಗೆ ಬಂತಂತೆ ಮನುಷ್ಯನಿಗೆ "100 ವರ್ಷದ ಆಯುಷ್ಯ"

ಬ್ರಹ್ಮ ಈ ಭೂಮಿಯ ಮೇಲೆ ಸಕಲ ಜೀವಿಗಳನ್ನು ಸೃಷ್ಠಿ ಮಾಡುವಾಗ ಮನುಷ್ಯನನ್ನು ಸೇರಿ ಎಲ್ಲಾ ಪ್ರಾಣಿಗಳನ್ನು ಸಭೆ ಕರೆದನಂತೆ ಎಲ್ಲರಿಗೂ ಅವರಿಗೆ ತಕ್ಕಂತೆ "ಆಯುಷ್ಯ"ವನ್ನು ಹಂಚಿದನಂತೆ.

ಅದನ್ನೆಲ್ಲಾ ಗಮನಿಸಿದ ದುರಾಸೆಯ ಮನುಷ್ಯ.ತನಗೆ ಸಿಕ್ಕ 20 ವರ್ಷದ ಆಯುಷ್ಯ ಸಾಲೋದಿಲ್ಲ. ನನಗೆ ಇನ್ನು ಇಪ್ಪತ್ತು ವರ್ಷಆಯುಷ್ಯ ಬೇಕು ಅಂದನಂತೆ.
ಬ್ರಹ್ಮನು "ಕತ್ತೆಯನ್ನು "ಕರೆದು ಕತ್ತೆಯ 20 ವರ್ಷದ ಆಯುಷ್ಯನ್ನು ಮನುಷ್ಯನಿಗೆ ವರ್ಗಾಯಿಸಿದನಂತೆ (21-40)

ಅಷ್ಟಕ್ಕೂ ಸಾಲದೇ ಪುನಃ 20 ವರ್ಷ
ಆಯುಷ್ಯ ಬೇಕು ಅಂದನಂತೆ ನಮ್ಮ ಮಾನವ. ಸರಿ ಬ್ರಹ್ಮನು "ನಾಯಿಯನ್ನು" ಕರೆದನಂತೆ ನಾಯಿಯ ಒಪ್ಪಿಗೆ ಮೇರೆಗೆ ನಾಯಿಯ 20 ವರ್ಷದ ಆಯುಷ್ಯನ್ನು ಮನುಷ್ಯನಿಗೆ ವರ್ಗಾಯಿಸಿದನಂತೆ (41-60)

ಮನುಷ್ಯನ ದುರಾಸೆ ಇನ್ನೊಂದು ಇಪ್ಪತ್ತು ಅಂತ ಬ್ರಹ್ಮನಿಗೆ ಕೋರಿಕೆ ಇಟ್ಟನಂತೆ. ಬ್ರಹ್ಮ
"ಹಸುವನ್ನು "ಕರೆದು ಚರ್ಚೆ ಮಾಡಿ ಹಸುವಿನ 20 ವರ್ಷದ ಆಯುಷ್ಯನ್ನು ಮನುಷ್ಯನಿಗೆ ವರ್ಗಾಯಿಸಿದನಂತೆ (61-80)

ಅಷ್ಟಕ್ಕೂ ತೃಪ್ತಿಯಾಗದ ಮನುಷ್ಯನ ಮನಸ್ಸು ಬ್ರಹ್ಮನೊಡನೆ ಗೋಗೆರೆದು ಇನ್ನೊಂದು 20 ವರ್ಷ ಅಂದನಂತೆ

ಬ್ರಹ್ಮನ ಸಿಟ್ಟು ನೆತ್ತಿಗೇರಿತಂತೆ ಕೋಪ ಗೊಂಡ ಬ್ರಹ್ಮನನ್ನು ನೋಡಿದ "ಗೂಬೆ"ಯು ಸ್ವಯಂಪ್ರೇರಿತವಾಗಿ ಬ್ರಹ್ಮನಲ್ಲಿಗೆ ಬಂದು ತನ್ನ 20 ವರ್ಷದ ಆಯುಷ್ಯನ್ನು ಮನುಷ್ಯನಿಗೆ ಕೊಟ್ಟಿತಂತೆ.

ಇದರ ಫಲವಾಗಿಯೇ
ಮನುಷ್ಯನ ಆಯುಷ್ಯ 100 ಆದರೂ
1 ರಿಂದ 20 ನಿಜವಾದ ಮನುಷ್ಯನಾಗಿ
21-40 ಕತ್ತೆ ಆಯುಷ್ಯ ಪಡೆದ. 20 ವರ್ಷ "ಕತ್ತೆ ಕೆಲಸ ಮಾಡುತ್ತಾನೆ"
41-60 ನಾಯಿ ಆಯುಷ್ಯ ಪಡೆದ. 20 ವರ್ಷ "ನಾಯಿ ಕೆಲಸ ಮಾಡುತ್ತಾನೆ"
61-80 ಹಸು ಆಯುಷ್ಯ ಪಡೆದ. 20 ವರ್ಷ "ಹಸು ಕೆಲಸ ಮಾಡುತ್ತಾನೆ"
81-100 ಗೂಬೆ ಆಯುಷ್ಯ ಪಡೆದ . 20 ವರ್ಷ "ಗೂಬೆ ಕೆಲಸ ಮಾಡುತ್ತಾನೆ"

ಇದು ತಿಳಿದವರ ವಾಖ್ಯಾನ.

ರಾಜು ವಿನಯ್ ದಾವಣಗೆರೆ

No comments:

Post a Comment